ಫಾಲುನ್ ದಾಫಾ meditation

English | हिन्दी | বাংলা | मराठी | తెలుగు | தமிழ் | ગુજરાતી | ಕನ್ನಡ | മലയാളം | ਪੰਜਾਬੀ

Indian practitioner, Exercise 3

ಫಾಲುನ್ ದಾಫಾ

ಸತ್ಯ, ಸಹಾನುಭೂತಿ, ಸಹನಶೀಲತೆ

ಫಾಲುನ್ ದಾಫಾ ಅಥವಾ ಫಾಲುನ್ ಗಾಂಗ್ ಎನ್ನುವುದು ಮನಸ್ಸು ಮತ್ತು ದೇಹದ ಒಂದು ಸಾಧನೆಯಾಗಿದ್ದು ಇದು ಉಚಿತವಾಗಿ ಹೇಳಿಕೊಡುವ ಒಂದು ಅಭ್ಯಾಸವಾಗಿದೆ. ಇದು ಧ್ಯಾನಸಹಿತವಾದ ಐದು ಬಗೆಯ ವ್ಯಾಯಾಮಗಳನ್ನೂ ಹೊಂದಿದೆ. ಈ ವ್ಯಾಯಾಮಗಳು ಶಾಂತತೆಯಿಂದ ಕೂಡಿದ್ದು, ಇವನ್ನು ಎಲ್ಲಾ ವಯಸ್ಸಿನವರು ಮತ್ತು ವೃತ್ತೀಪರರು ಸುಲಭವಾಗಿ ಕಲಿತು ಅಭ್ಯಾಸ ಮಾಡಬಹುದಾಗಿದೆ. ಇದು ಬುದ್ಧ ಶಾಲೆಯ ಒಂದು ಅಭ್ಯಾಸ ಪದ್ಧತಿಯಾಗಿದ್ದು, ಬ್ರಹ್ಮಾಂಡದ ತತ್ವಗಳಾದ ಸತ್ಯ, ಸಹಾನುಭೂತಿ ಮತ್ತು ಸಹನಶೀಲತೆ ತತ್ವಗಳ ಆಧಾರದ ಮೇಲೆ ಜನರಲ್ಲಿ ಆಧ್ಯಾತ್ಮಿಕತೆಯನ್ನು ಹಾಗೂ ಸ್ವಯಂ ಸುಧಾರಣೆಯನ್ನು ಉತ್ತೇಜಿಸುವುದು.

ಫಾಲುನ್ ದಾಫಾವನ್ನುಅಭ್ಯಾಸ ಮಾಡುತ್ತಿರುವರು ಸಾಮಾನ್ಯವಾಗಿ ಆರೋಗ್ಯ ಪ್ರಯೋಜನಗಳನ್ನು, ನವಚೈತನ್ಯವನ್ನು, ಮಾನಸಿಕ ಸ್ಪಷ್ಟತೆಯನ್ನು ಮತ್ತು ಒತ್ತಡಗಳಿಂದ ಮುಕ್ತಿಯನ್ನೂ ಹೊಂದಿದ್ದಾರೆ. ಫಾಲುನ್ ದಾಫಾವು ಮೊಟ್ಟ ಮೊದಲಿಗೆ ಚೀನಾದಲ್ಲಿ ಮಾಸ್ಟರ್ ಲೀ ಹಾಂಗ್ ಜ್ಚ್ರರವರಿಂದ ಪರಿಚಯಿಸಲ್ಪಟ್ಟಿದೆ. ಭಾರತವೂ ಸೇರಿದಂತೆ ವಿಶ್ವಾದ್ಯಂತ 100 ಕ್ಕೂ ಅಧಿಕ ದೇಶಗಳಲ್ಲಿ ಕೋಟಿಗಟ್ಟಲೆ ಜನರು ಇದರ ಅಭ್ಯಾಸ ಮಾಡುತ್ತಿದ್ದಾರೆ.

100%ರಷ್ಟು ಉಚಿತವಾಗಿ, ಆನ್‌ಲೈನ್ ಮೂಲಕ ಅಥವಾ ಮುಖಾಮುಖಿಯಾಗಿ ಕಲಿಯಿರಿ

ಫಾಲುನ್ ದಾಫಾವನ್ನು ಭಾರತವೂ ಸೇರಿದಂತೆ ಪ್ರಪಂಚಾದ್ಯಂತ ಸದಾ 100%ರಷ್ಟು ಉಚಿತವಾಗಿ ಕಲಿಸಲಾಗುತ್ತಿದೆ ಮತ್ತು ಅಭ್ಯಾಸ ಮಾಡಲಾಗುತ್ತಿದೆ. ಹೌದು, ಈ ಅದ್ಭುತ ಅಭ್ಯಾಸವನ್ನು ಕಲಿಯುವುದಕ್ಕೆ ಯಾವುದೇ ವೆಚ್ಚವಿಲ್ಲ! ನೀವು ಈ ಕೆಳಗಿನ ವಿಧಾನಗಳ ಮೂಲಕ ಆನ್‌ಲೈನ್ ಅಥವಾ ಮುಖಾಮುಖಿಯಾಗಿ ಫಾಲುನ್ ದಾಫಾವನ್ನುಕಲಿಯಬಹುದು.

ಫೇಸ್ಬುಕ್ ಮೆಸೆಂಜರ್ ಅಥವಾ WhatsApp ಮೂಲಕ ಸಂದೇಶವನ್ನು ಕಳುಹಿಸಿ ಫೇಸ್ ಬುಕ್ ಪುಟ (Facebook page)
ಆನ್ ಲೈನ್ ಉಚಿತ ಆನ್‌ಲೈನ್ ತರಗತಿಗಾಗಿ ನೊಂದಾಯಿಸಿ LearnFalunGong.in
ಮುಖಾಮುಖಿ ನಿಮಗೆ ಹತ್ತಿರದ ನಗರದಲ್ಲಿರುವ ಸ್ವಯಂ ಸೇವಕರನ್ನು ಹುಡುಕಿ FalunDafaIndia.org

ಧ್ಯಾನಸಹಿತ ವ್ಯಾಯಾಮಗಳು

ಫಾಲುನ್ ದಾಫಾದಲ್ಲಿ 5 ಸರಳ ಧ್ಯಾನಸಹಿತ ವ್ಯಾಯಾಮಗಳಿದ್ದು ಇವುಗಳಲ್ಲಿ ನಾಲ್ಕು ನಿಂತು ಮಾಡುವ ಮತ್ತು ಒಂದು ಕುಳಿತು ಮಾಡುವ ವ್ಯಾಯಾಮಗಳಾಗಿವೆ. ಈ ವ್ಯಾಯಾಮಗಳನ್ನು ಸುಲಭವಾಗಿ ಕಲಿಯಬಹುದು ಮತ್ತು ಯಾವುದೇ ಬೇಧಭಾವವಿಲ್ಲದೆ ಎಲ್ಲಾ ವಯಸ್ಸಿನ ಜನರು ಈ ವ್ಯಾಯಾಮಗಳ ಅಭ್ಯಾಸ ಮಾಡಬಹುದು. Five exercises

ಬುದ್ಧ ಸಾವಿರ ಕೈಗಳನ್ನು ಚಾಚುತ್ತಿರುವುದು ಈ ವ್ಯಾಯಾಮವು ಸೌಮ್ಯವಾಗಿ ಚಾಚುವಿಕೆಯ ಚಲನೆಗಳನ್ನು ಬಳಸಿಕೊಂಡು ದೇಹದ ಎಲ್ಲಾ ಶಕ್ತಿ ಮಾರ್ಗಗಳನ್ನು ತೆರೆಯುವುದು.
ಫಾಲುನ್ ನಿಂತಿರುವ ನಿಲುವು ಇದು ನಾಲ್ಕು ಹಂತಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಹಂತದಲ್ಲೂ ಪಾಲುನನ್ನು ತೋಳುಗಳ ನಡುವೆ ಹಿಡಿದುಕೊಂಡು ಹಲವಾರು ನಿಮಿಷಗಳವರೆಗೆ ಸ್ಥಿರವಾದ ಭಂಗಿಯಲ್ಲಿ ನಿಂತುಕೊಳ್ಳುವುದಾಗಿದೆ. ಈ ವ್ಯಾಯಾಮವು ಒಬ್ಬರ ಶಕ್ತಿಯ ಮಟ್ಟವನ್ನು ಹೆಚ್ಚಿಸುವುದು ಮತ್ತು ವಿವೇಕವನ್ನು ಜಾಗೃತಗೊಳಿಸುವುದು.
ಬ್ರಹ್ಮಾಂಡದ ಎರಡು ಕೊನೆಗಳನ್ನು ಭೇದಿಸುವುದು ಕೈಗಳನ್ನು ಸೌಮ್ಯವಾಗಿ ಚಲಿಸುವ ಮೂಲಕ, ಈ ವ್ಯಾಯಾಮವು ಬ್ರಹ್ಮಾಂಡದ ಶಕ್ತಿಯನ್ನು ಬಳಸಿಕೊಂಡು ದೇಹವನ್ನು ಶುದ್ಧೀಕರಿಸುವುದು.
ಫಾಲುನ್ ದಿವ್ಯ ಪರಿಧಿ ಕೈಗಳನ್ನು ತಲೆಯಿಂದ ಪಾದದವರೆಗೂ ಸೌಮ್ಯವಾಗಿ ಚಲಿಸುವುದರ ಮೂಲಕ ಈ ವ್ಯಾಯಾಮವು ದೇಹದ ಎಲ್ಲಾ ಅಸಹಜ ಸ್ಥಿತಿಯನ್ನು ಸರಿಪಡಿಸುವುದು ಮತ್ತು ದೇಹಾದ್ಯಂತ ಶಕ್ತಿಯ ಪರಿಚಲನೆಯಾಗುವಂತೆ ಮಾಡುವುದು.
ದೈವಿಕ ಶಕ್ತಿಗಳನ್ನು ಬಲಪಡಿಸುವುದು ಆಳವಾದ ಶಾಂತತೆಯನ್ನು ಪ್ರವೇಶಿಸಿ, ಒಬ್ಬರ ಮನಸ್ಸು ಮತ್ತು ದೇಹವನ್ನು ಪರಿವರ್ತಿಸುವುದರ ಮೂಲಕ, ದೈವಿಕ ಶಕ್ತಿಗಳನ್ನು ಮತ್ತು ಶಕ್ತಿಸಾಮರ್ಥ್ಯವನ್ನು ಬಲಪಡಿಸುವ ಒಂದು ಧ್ಯಾನಾಭ್ಯಾಸ

ಪುಸ್ತಕಗಳು

ಜುವಾನ್ ಫಾಲುನ್ ಪರಿಚಯಾತ್ಮಕ ಪುಸ್ತಕವು ಫಾಲುನ್ ಗಾಂಗ್ ಆಗಿದ್ದು, ಮುಖ್ಯ ಬೋಧನೆಗಳು ಜ್ಚುಆನ್ ಪಾಲುನ್ ಪುಸ್ತಕದಲ್ಲಿಅಡಕಗೊಂಡಿರುವುದು. ಹಲವಾರು ಪೂರಕ ಉಪನ್ಯಾಸಗಳು ಸಹ ಲಭ್ಯವಿವೆ. ಎಲ್ಲಾ ಸಾಹಿತ್ಯಗಳು FalunDafa.org ನಲ್ಲಿಉಚಿತವಾಗಿ ಡೌನ್‌ಲೋಡ್ ಮಾಡಲು ಲಭ್ಯವಿದೆ.

ಫಾಲುನ್ ಗಾಂಗ್ ಚಿತ್ರಗಳೊಂದಿಗೆ ವ್ಯಾಯಾಮಗಳ ವಿವರಗಳನ್ನು ಒಳಗೊಂಡಿರುವ ಒಂದು ಪರಿಚಯಾತ್ಮಕ ಪುಸ್ತಕ.
ಜುವಾನ್ ಫಾಲುನ್ ಮುಖ್ಯ ಬೋಧನೆಗಳನ್ನು ಒಳಗೊಂಡಿರುವ ಪುಸ್ತಕ.

1996 ರಿಂದ ಇಲ್ಲಿಯವರೆಗಿನ ಎಲ್ಲಾ ಪೂರಕ ಉಪನ್ಯಾಸಗಳು FalunDafa.org ವೆಬ್‌ಸೈಟ್ ನಲ್ಲಿ ಲಭ್ಯವಿದೆ

ವೀಡಿಯೊ ಮತ್ತುಆಡಿಯೊ

ವೀಡಿಯೊ ಚಿತ್ರಗಳು ಮತ್ತು ಆಡಿಯೊಗಳೆಲ್ಲವೂ ಉಚಿತವಾಗಿ FalunDafa.org ವೆಬ್‌ಸೈಟ್ನಲ್ಲಿ ಲಭ್ಯವಿದೆ.

ವ್ಯಾಯಾಮದ ಸಂಗಿತ 1 ರಿಂದ 5 ರವರೆಗಿನ ವ್ಯಾಯಾಮಗಳನ್ನು ಮಾಡುವಾಗ ಬಳಸಬಹುದು.
ವ್ಯಾಯಾಮಗಳ ಸೂಚನೆ ವ್ಯಾಯಾಮಗಳನ್ನು ಹೇಗೆ ಮಾಡಬೇಕೆಂಬುವುದನ್ನು ತಿಳಿಸುವ ಸೂಚನೆಯ ವೀಡಿಯೊ.
ವೀಡಿಯೊ ಉಪನ್ಯಾಸಗಳು 9 ಉಪನ್ಯಾಸಗಳ ಸರಣಿ.

ಚೀನಾದಲ್ಲಿ ಕಿರುಕುಳ

ಫಾಲುನ್ ದಾಫಾವು ಚೀನಾದಲ್ಲಿ ಸಾರ್ವಜನಿಕವಾಗಿ ಪರಿಚಯಗೊಂಡು, ಪ್ರಪಂಚದಾದ್ಯಂತ ಕೋಟಿಗಟ್ಟಲೆ ಜನರು ಅಭ್ಯಾಸಿಸುತ್ತಿದ್ದರೂ ಫಾಲುನ್ ದಾಫಾದ ಉಗಮ ಸ್ಥಳವಾದ ಚೀನಾದಲ್ಲಿಯೇ ಚೀನೀ ಕಮ್ಯುನಿಸ್ಟ ಪಕ್ಷ(ಸಿಸಿಸಪಿ)ವು ಫಾಲುನ್ ದಾಫಾ ಮೇಲೆ ನಿಷೇಧ ಹೇರಿದೆ. ಇತರ ಅಲ್ಪಸಂಖ್ಯಾತ ಗುಂಪುಗಳಿಗೆ ಕಿರುಕುಳ ನೀಡುವಂತೆ ಫಾಲುನ್ ಗಾಂಗ್ ಸಾಧಕರಿಗೂ ಕೂಡ ಹಿಂಸಾತ್ಮಕವಾಗಿ ಮತ್ತು ನಿರ್ದಯವಾಗಿ ಕಿರುಕುಳವನ್ನು ನೀಡುತ್ತಿದೆ. ಕೆಳಗಿನ ಲಿಂಕ್‌ಗಳಲ್ಲಿ ಇನ್ನಷ್ಟು ತಿಳಿದುಕೊಳ್ಳಿ.